ಕೊಳ್ಳೇಗಾಲ, ಪಟ್ಟಣದ ಸಮೀಪದ ಬಸ್ತಿಪುರದಲ್ಲಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಕೊಳ್ಳೆಗಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಅವರಿಂದ ಸುಮಾರು ₹31,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಜೂಜಾಟನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಕೊಳ್ಳೆಗಾಲ ಪೊಲೀಸ್ ಠಾಣೆಯ ಪಿಎಸ್ಐ ವರ್ಷಾ ಹಾಗೂ ಉಮಾವತಿ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಲು ಯಶಸ್ವಿಯಾಯಿತು. ದಾಳಿಯ ವೇಳೆ ಡಿವೈಎಸ್ಪಿ ಅಪರಾಧ ಪತ್ತೆದಳದ ತಕಿವುಲ್ಲಾ, ಸಿಬ್ಬಂದಿಗಳಾದ ವೆಂಕಟೇಶ್, ಬಿಳಿಗೌಡ, ಶಿವು ಮತ್ತು ಪಟ್ಟಣ ಠಾಣೆಯ ಸಿಬ್ಬಂದಿ ಹಾಜರಿದ್ದರು