ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯೆ ಇರುವ ಬಿ.ಆರ್.ಟಿ.ಎಸ್ ಮಾರ್ಗದಲ್ಲಿನ ಅಡಚಣೆಗಳನ್ನು ಶನಿವಾರ ಮದ್ಯಾಹ್ನ 2 ಗಂಟೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪರಿಶೀಲಿಸಿದರು. ಹುಬ್ಬಳ್ಳಿಯಿಂದ ಧಾರವಾಡದವರೆಗಿನ ಬಿ.ಆರ್.ಟಿ.ಎಸ್ ಮಾರ್ಗದಲ್ಲಿ ಸಂಚರಿಸಿ ಸಮಸ್ಯೆಗಳನ್ನು ಖುದ್ದಾಗಿ ಅರಿಯುವ ನಿಟ್ಟಿನಲ್ಲಿ ಚಿಗರಿ ಬಸ್ ನಲ್ಲಿ ಸಂಚರಿಸಿದರು. ಹುಬ್ಬಳ್ಳಿಯ ಹೊಸೂರ ಸರ್ಕಲ್ ನಿಂದ ಧಾರವಾಡದ ಜ್ಯುಬಿಲಿ ಸರ್ಕಲ್ ವರೆಗೆ ಸಾರ್ವಜನಿಕರಿಗೆ