ಚಿತ್ರದುರ್ಗ:: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಚಿತ್ರದುರ್ಗ ಮತ್ತು ದಾವಣಗೆರೆ ಇವರ ವತಿಯಿಂದ ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ಬಹುತ್ವದ ಕುರಿತಾಗಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ನಗರದ- ಅಲೆಮಾರಿ ಸಮುದಾಯ ಮತ್ತು ಚಳ್ಳಕೆರೆ ತಾಲೂಕಿನ ಕೆರೆಯೂಗಳಹಳ್ಳಿ ಲಂಬಾಣಿ ತಾಂಡ್ಯ ಹಾಗೂ ನಾಯಕನಹಟ್ಟಿ ಪಟ್ಟಣದ 5ನೇ ವಾರ್ಡಿನ ಕೊರಚ, ಸುಡುಗಾಡು ಸಿದ್ದರು ಮೂಂಡರು, ದೂಂಬಿದಾಸರು, ಅಲೆಮಾರಿ ಅರೆಅಲೆಮಾರಿ ಸ್ಥಳಗಳಲ್ಲಿ ಭೇಟಿ ನೀಡಿದ ಯುವಜನರು ಸ್ಥಳೀಯ ಸಾಂಸ್ಕೃತಿಕ ಬಹುತ್ವ ಹಾಗೂ ಶ್ರಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.