ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ಹರಿಬಿಡುತ್ತಿರುವ ವಿಷಪೂರಿತ ರಾಸಾಯನಿಕ ತ್ಯಾಜ್ಯಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ, ಕಾಣದ ಕೈಗಳ ಮಧ್ಯೆ ಒಳ ಒಪ್ಪಂದವಿದೆ ಎಂದು ವಿಧಾನ ಪರಿಷತ್ ಸದಸ್ಯರ ಚಂದ್ರಶೇಖರ್ ಪಾಟೀಲ ಆರೋಪಿಸಿದರು. ವಿಷಪೂರಿತ ರಾಸಾಯನಿಕ ಅತ್ಯಾಚಾರದಿಂದ ಜನ ಜಾನುವಾರು ಬೆಳೆ ಸಂಪೂರ್ಣ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ತೋಡಿಕೊಂಡ ಅಳಲಿನ ಕಾರಣ ಮಂಗಳವಾರ ಮಧ್ಯಾಹ್ನ 2ಕ್ಕೆ ಭೇಟಿ ನೀಡಿ ಮಾತನಾಡಿದರು.