ಕಲಬುರಗಿ : ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರನ್ನ ಆಹ್ವಾನಿಸಿದ್ದಕ್ಕೆ ಕಲಬುರಗಿಯಲ್ಲಿ ಆಕ್ರೋಶ ಭುಗಿಲೆದ್ದಿದೆ.. ಬಾನು ಮುಷ್ತಾಕ್‌ರನ್ನ ಆಹ್ವಾನಿಸಿದ್ದನ್ನ ಖಂಡಿಸಿ ಸೆಪ್ಟೆಂಬರ್ 3 ರಂದು ಬೆಳಗ್ಗೆ 11.30 ಕ್ಕೆ ನಗರದ ಡಿಸಿ ಕಚೇರಿ ಬಳಿ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದೆ.. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಬರ್ತಿದ್ದು, ಇದೀಗ ನಾಡಹಬ್ಬ ದಸಾರಕ್ಕೆ ಹಿಂದೂ ಸಂಸ್ಕೃತಿಯೇ ಗೋತ್ತಿಲ್ಲದ ಬಾನು ಮುಷ್ತಾಕ್‌ರನ್ನ ಆಹ್ವಾನ ಮಾಡುವುದರ ಮೂಲಕ ಮುಸ್ಲಿಂರ ಒಲೈಕೆಗೆ ಸರ್ಕಾರ ಮುಂದಾಗಿದೆ ಅಂತಾ ಹಿಂದೂ ಜಾಗೃತಿ ಸೇನೆ ಕಿಡಿಕಾರಿದೆ..