ಅಡರಕಟ್ಟಿ-ಬಟ್ಟೂರ ರಸ್ತೆಯಲ್ಲಿ ಅಡರಕಟ್ಟಿ ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಕೆರೆಯ ಸಮೀಪ ರಸ್ತೆಯ ಮೇಲೆ ಆರೋಪಿತನಾದ ಟ್ರ್ಯಾಕ್ಟರ ಚಾಲಕ ಮುತ್ತು ಬೇಟಗೇರಿ ಈತನು ಸ್ವರಾಜ ಕಂಪನಿಯ ಟ್ರ್ಯಾಕ್ಟರ್ ನಲ್ಲಿ ಮರಳನ್ನು ಯಾವುದೇ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಬಟ್ಟೂರ ಕಡೆಯಿಂದ ಅಡರಕಟ್ಟಿ, ಮಂಜಲಾಪೂರ ಮಾರ್ಗವಾಗಿ ಲಕ್ಷೇಶ್ವರ ಕಡೆಗೆ ಕಳ್ಳತನದಿಂದ ಸಾಗಾಟ ಮಾಡುವಾಗ ನಾಗರಾಜ ಮಾಡಳ್ಳಿ, ಸಿಪಿಐ-ಶಿರಹಟ್ಟಿ ವೃತ್ತ ಇವರು ದಾಳಿ ಮಾಡಿ ಟ್ರ್ಯಾಕ್ಟರ್ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.