ಚನ್ನಪಟ್ಟಣಕ್ಕೆ ಬರುತ್ತಿರುವ ಕಾವೇರಿ ನೀರಿನ ಸರಬರಾಜಿನಲ್ಲಿ ಮೂರು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ. ಆ.23 ರಿಂದ 25ರ ವರೆಗೆ ಕಾವೇರಿ ನೀರು ಸರಬರಾಜು ಆಗೋದಿಲ್ಲ. ಹಲಗೂರು ಗ್ರಾಮದ ಬಳಿ ಖಾಸಗಿ ವ್ಯಕ್ತಿ ಕೊಳವೆ ಬಾವಿ ಕೊರೆಸುವ ಸಂದರ್ಭದಲ್ಲಿ ಏರು ಕೊಳವೆ ಮಾರ್ಗವನ್ನ ಹಾನಿಮಾಡಿದ್ದಾರೆ. ಹಾಗಾಗಿ ನೀರು ಸೊರಿಕೆ ಆಗುತ್ತಿದ್ದು ಅದನ್ನ ದುರಸ್ತಿ ಪಡೆಸಲು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಜಲಮಂಡಳಿ ಇಂಜಿನಿಯರ್ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.