ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗುತ್ತಿರುವ ಹಿನ್ನಲೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಮಂಡ್ಯ ತಾಲೂಕಿನ ಅಭ್ಯರ್ಥಿ ಸತೀಶ್, ಮಳವಳ್ಳಿ ಅಭ್ಯರ್ಥಿ ಶಾಸಕ ಪಿಎಂ ನರೇಂದ್ರಸ್ವಾಮಿ, ನಾಗಮಂಗಲ ಕ್ಷೇತ್ರದಿಂದ ಸಚಿನ್ ಚಲುವರಾಯಸ್ವಾಮಿ, ಕೆ ಆರ್ ಪೇಟೆಯಿಂದ ಅಂಬರೀಶ್, ಮದ್ದೂರುತಾಲ್ಲೂಕು ವಿಎಸ್ಎಸ್ಎನ್ ಕ್ಷೇತ್ರದಿಂದ ಪಿ.ಸಂದರ್ಶ, ಹಾಲು ಉತ್ಪಾದಕರ ಸಹಕಾರ ಸಂಘಗಳ ಮದ್ದೂರು. ಮಳವಳ್ಳಿ ಮತ್ತು ಮಂಡ್ಯ ತಾಲೂಕು ವ್ಯಾಪ್ತಿಯ ಕ್ಷೇತ್ರ ಕ್ಕೆ ತೈಲೂರು ಚಲುವರಾಜು ಆಯ್ಕೆ ಮಾಡಲಾಗಿದೆ ಎಂದರು.