ಕ್ಷುಲಕ ಕಾರಣಕ್ಕೆ ಸಹೋದರರ ನಡುವೆ ಗಲಾಟೆ ಕೊನೆಯಲ್ಲಿ ಅಂತ್ಯವಾಗಿದೆ.ಈ ಘಟನೆ ಶಿವಮೊಗ್ಗ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ. ಜನಾರ್ಧನ್(27) ಕೊಲೆಯಾದ ಯುವಕನಾಗಿದ್ದಾನೆ. ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಜನಾರ್ದನ್ ಚಿಕ್ಕಪ್ಪನ ಮಗ ಹನುಮಂತನ ಕಾಲಿಗೆ ಪೆಟ್ಟಾಗಿತ್ತು. ಇದೇ ಕಾರಣಕ್ಕೆ ಆಗಾಗ ಅಣ್ಣ ಜನಾರ್ಧನ್ ಹನುಮಂತನಿಗೆ ರೇಗಿಸುತ್ತಿದ್ದ. ಕಾಲು ಅರ್ಧ ಹೋಯಿತು. ಪೂರ್ತಿ ಹೋಗಿಲ್ಲ ಎಂದು ರೇಗುಸ್ತಿದ್ದ ಜನಾರ್ಧನ್ ಮಾತಿಗೆ ಕೋಪಗೊಂಡ ಹನುಮಂತ ನಿನ್ನೆ ಚಾಕುವಿನಿಂದ ಹಿಡಿದಿದ್ದಾನೆ ಕೂಡಲೇ ಜನಾರ್ದನ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹನುಮಂತನ ವಶಕ್ಕೆ ಪಡೆದ ವಿನೋಬನಗರ ಪೊಲೀಸರು.