ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ ಸಂಬಂಧಿಸಿ ಗುರುವಾರ ಬೆಳಗ್ಗೆ 11:40 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ಯಾವುದೇ ಸರ್ಕಾರ ಇದ್ದರೂ ಎಸ್‌ಐಟಿ ಮಾಡಲೇಬೇಕಿತ್ತು. ಅದು ಸತ್ಯ ಇರಲಿ, ಸುಳ್ಳು ಇರಲಿ ತನಿಖೆ ಮಾಡಬೇಕಿತ್ತು. ಬಿಜೆಪಿಯವ್ರು ಕೂಡ ಎಸ್‌ಐಟಿ ಸ್ವಾಗತ ಮಾಡಿದ್ದಾರೆ. ಆದರೆ ಈಗ ರಾಜಕೀಯವಾಗಿ ಉಪಯೋಗಿಸುತ್ತಿದ್ದಾರೆ ಮೊದಲು ಸ್ವಾಗತ ಮಾಡಿ ಕೊನೆ ಹಂತಕ್ಕೆ ನಾಟಕ ಮಾಡ್ತಿದ್ದಾರೆ. ಆರೋಪಗಳು ಬಂದಾಗ ಸ್ವಾಭಾವಿಕವಾಗಿ ತನಿಖೆ ಮಾಡಬೇಕಾಗುತ್ತೆ. ಇದರಿಂದ ಧರ್ಮಸ್ಥಳ ಇನ್ನು ಶಕ್ತಿಶಾಲಿ ಆಗುತ್ತೆ , ಇನ್ನು ವಿಶ್ವಾಸ ಬರುತ್ತೆ ಎಂದರು.