ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಬೇಕೆಂದು ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು. ಅಗತ್ಯವಾದರೆ ಇ.ಡಿ. ಹಣಕಾಸು ತನಿಖೆ ನಡೆಸಬೇಕು ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು. ಬುರುಡೆ ವ್ಯಕ್ತಿಯ ಪ್ರಾಥಮಿಕ ತನಿಖೆ ಸಮಯಕ್ಕೆ ನಡೆದಿದ್ದರೆ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿರಲಿಲ್ಲ ಎಂದರು. ಆರೋಪದಲ್ಲಿ ಹುರುಳಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದರು. ಸುಜಾತಾ ಭಟ್ ಮತ್ತು ಬುರುಡೆ ಪ್ರಕರಣ ಮಾಧ್ಯಮದಲ್ಲಿ ಬಯಲಾಗಿವೆ.