ರಾಯಚೂರು ಜಿಲ್ಲೆಯ ಜನತಾ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಮೂರು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟ ಮಾದಯ್ಯ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ದೇವದುರ್ಗ ಪಟ್ಟಣದಲ್ಲಿ ಏ ಕುರಿತು ಹೇಳಿಕೆ ನೀಡಿ, ಮಾನ್ವಿ ಪಟ್ಟಣದಲ್ಲಿ ಎರಡು ಹಾಗೂ ರಾಯಚೂರ ನಗರದ ಸದನ ಬಜಾರ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಸರ್ಕಾರದ ನಿಯಮಗಳನ್ನು ಯಾರು ಉಲ್ಲಂಘನೆ ಮಾಡದಂತೆ ಸೂಚನೆ ನೀಡಿದರು.