ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಬಗರ್ ಹುಕುಂ ಹೋರಾಟಗಾರರ ಧರಣಿ ಸತತ ಏಳನೇ ದಿನಕ್ಕೆ ಕಾಲಿಟ್ಟಿದೆ. ಲಂಬಾಣಿ ಭಜನಾ ಪದ ಹಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ನಾಗಾವಿಯ ಆರ್.ಡಿ.ಪಿ.ಆರ್ ವಿಶ್ವ ವಿದ್ಯಾಲಯ ನಿರ್ಮಿಸಲು ರೈತರಿಂದ ಭೂಮಿ ಕಬಳಿಸಿ ಪರಿಹಾರ ನೀಡದೇ ಮೋಸ ಮಾಡಲಾಗಿದೆ ಅಂತ ಆರೋಪಿಸಿ ರೈತರು ಈ ಹೋರಾಟ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ್ ಅಂಗಡಿ ನಾಯಕತ್ವದಲ್ಲಿ ಈ ಹೋರಾಟ ನಡೆಯುತ್ತಿದೆ.