ಟೈಯರ್ ಬಸ್ಟ್ ಆಗಿ ಸಿಮೆಂಟ್ ಟ್ಯಾಂಕರ್ ಗೆ ಹೊತ್ತಿಕೊಂಡ ಬೆಂಕಿ. ನೋಡ ನೋಡುತ್ತಿದ್ದಂತೆ ಟ್ಯಾಂಕರ್ ಆವರಿಸಿಕೊಂಡ ಬೆಂಕಿಯ ಜ್ವಾಲೆ.ಸಿದ್ದಾಪುರ ಗ್ರಾಮದ ಸಮೀಪ ನಡೆದ ಘಟನೆ. ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕದ ದಳದ ಸಿಬ್ಬಂದಿ ದೌಡು.ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ. ಹೆದ್ದಾರಿಯಲ್ಲಿ ಟ್ಯಾಂಕರ್ ಗೆ ಬೆಂಕಿ ಆವರಿಸಿದ ಹಿನ್ನೆಲೆ. ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಳಿಸಿದ ಪೊಲೀಸರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ. ಲೋಕಾಪುರದಿಂದ-ಜಮಖಂಡಿ ಮಾರ್ಗವಾಗಿ ಬರ್ತಿದ್ದ ಟ್ಯಾಂಕರ್.ಟ್ಯಾಂಕರ್ ನ ಮುಂಭಾಗದ ಎಂಜೀನ್ ಸಂಪೂರ್ಣ ಬೆಂಕಿಗಾಹುತಿ.ಸಿಮೆಂಟ್ ತುಂಬಿದ ಟ್ಯಾಂಕ್ ಗೆ ಹಾನಿಯಾಗಿಲ್ಲ.