ವಿಜಯಪುರ ನಗರದ ಶಂಕರಲಿಂಗ ದೇವಸ್ಥಾನದ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶುಕ್ರವಾರ ಸಾಯಂಕಾಲ 6ಗಂಟೆ ಸುಮಾರಿಗೆ ಕಾಂಗ್ರೆಸ್ ಮುಖಂಡ ಬಾಬು ರಾಜೇಂದ್ರ ನಾಯಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಗಜಾನನ ಯುವಕ ಮಂಡಳಿಯವರು ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಬಡವರಿಗೆ ಅನುಕೂಲವಾಗುತ್ತದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಜಾನನ ಯುವಕ ಮಂಡಳಿಯ ಸದಸ್ಯರಗಳು ಹಾಗೂ ಮಹಾನಗರ ಪಾಲಿಕೆಯ ಸದಸ್ಯ ಶಿವರುದ್ರ ಬಾಗಲಕೋಟ್ ಉಪಸ್ಥಿತರಿದ್ದರು.