ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಸಮೀಪದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ, ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ಮುಂಜಾನೆ 2ರಲ್ಲಿ ಸಂಭವಿಸಿದೆ. ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ ಮಹಾರಾಷ್ಟ್ರ ಮೂಲದ ಚಾಲಕ ಆಕಾಶ್, ಕಾವೇರಿಪುರ ಸಮೀಪದ ಜಮೀನಿನಿಂದ ಕಬ್ಬು ತುಂಬಿಸಿಕೊಂಡು ಕುಂತೂರು ಸಕ್ಕರೆ ಕಾರ್ಖಾನೆಗೆ ತೆರಳುತ್ತಿದ್ದ ಸಂದರ್ಭ, ಟ್ರಾಕ್ಟರ್‌ನ ನಿಯಂತ್ರಣ ತಪ್ಪಿ ಮುಳ್ಳೂರು ಬಳಿ ಪಲ್ಟಿಯಾಗಿದೆ. ಈ ಅಪಘಾತದ ಪರಿಣಾಮ ಟ್ರಾಕ್ಟರ್ ರಸ್ತೆಗೆ ಉರುಳಿದ್ದು, ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರ ಸಹಾಯದಿಂದ, ಉರುಳಿದ ಟ್ರಾಕ್ಟರ್‌ನ್ನು ಭಾನುವಾರ ಬೆಳಿಗ್ಗೆ 11 ಗಂಟೆಗೆ ತೆರವುಗೊಳಿಸಲಾಯಿತು.