ಮಳವಳ್ಳಿ ; ಸಾಲ ಭಾದೆಯಿಂದ ರೈತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಎನ್ ಕೋಡಿಹಳ್ಳಿ ಗ್ರಾಮದ ವಾಸಿ ಲೋಕೇಶ್ ಎಂಬುವರ ಪತ್ನಿಯಾದ 40 ವರ್ಷದ ನಾಗರತ್ನ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಾಗಿದ್ದಾರೆ. ಗುರುವಾರ ಮುಂಜಾನೆ 5.30 ರ ಸಮಯದಲ್ಲಿ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಈಕೆ ಯನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30 ಸಮಯದಲ್ಲಿ ಮೃತಪಟ್ಟರೆಂದು ವರದಿಯಾಗಿದೆ. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.