ಕೊಲ್ಗೇಟ್, ಪೆಪ್ಸಿ, ಕೋಕೋಕೋಲಾ, ಥಮ್ಸಪ್, ಅಮೇಜಾನ್, ಟೈಟಾನ್, ನಸಟ್ಲೆ, ವಾಟರ್ ಬಾಟಲ್, ಹೀಗೆ ಅಮೇರಿಕಾದ ಅನೇಕ ಪ್ರಾಡಕ್ಟ್ ಗಳನ್ನು ದೇಶದ 140 ಕೋಟಿ ಜನರು ಖರೀದಿ ಮಾಡುವುದು ಬಿಟ್ಟು, ಸ್ವದೇಶಿ ವಸ್ತುಗಳನ್ನು ಬಳಸಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರತದ ಶಕ್ತಿ ಏನೆಂದು ತೋರಿಸಬೇಕಾಗಿದೆ ಎಂದು ಕೊಲ್ಲಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು. ಸಿಂಧನೂರು ನಗರದಲ್ಲಿ ಶುಕ್ರವಾರ ಜರುಗಿದ ಸಾವಯವ ಸಿರಿಧಾನ್ಯ ಕೃಷಿ ಹಾಗೂ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ಸುರೇಶ ನೆಕ್ಕಂಟಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ್ ತಿಲಗೇರಿ, ಮಳ್ಳಮೂಡಿ ಮಾದವರಾವ್, ವೇದಿಕೆ ಮೇಲಿದ್ದ