ಅಕ್ರಮ ಗೋಮಾಂಸ ಅಡ್ಡೆಯ ಮೇಲೆ ದಾಳಿ ನಡೆಸಿ ಊರ್ವನನ್ನ ಬಂಧನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕಾಳನಾಯಕನ ಕಟ್ಟೆ ಗ್ರಾಮದಲ್ಲಿ ನಡೆದಿದೆ. ಖಳನಾಯಕನ ಕಟ್ಟೆಯ ಗ್ರಾಮದ ನಿವಾಸಿ ನೂರುಲ್ಲಾ ಎಂಬುವವನು ಮನೆಯ ಹಿಂದೆ ಗೋವುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ಹರಿಹರಪುರ ಪೊಲೀಸರು ಆರೋಪಿ ನೂರುಲ್ಲಾನನ್ನ ಬಂಧಿಸಿದ್ದಾರೆ.