ಮದ್ದೂರು ಗಣೇಶ ಮೆರವಣಿಗೆಯಲ್ಲಿ ಗಲಭೆ ಎಬ್ಬಿಸಿದ ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ನಗರದ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಮಂಗಳವಾರ ನಗರದ ಡಿಸಿ ಕಚೇರಿ ಬಳಿ ಜಮಾವಣೆಗೊಂಡು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಗೂಂಡಗಳ ವಿರುದ್ದ ಕ್ರಮ ವಹಿಸಲು ಆಗ್ರಹಿಸಿದರು. ಹಿಂದೂಗಳ ಆರಾಧ್ಯ ದೈವ ಗಣಪತಿ ವಿಸರ್ಜನೆ ವೇಳೆ ಮಸೀದಿ ಒಳಗಿನಿಂದ ಕಿಡಿಗೇಡಿ ಗಲಭೆಕೋರರು ಕಲ್ಲು ತೂರಾಟ ನಡೆಸಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಸದರಿ ಘಟನೆಯ ಹಿಂದೆ ಮೂಲಭೂತ ಜಸಂಘಟನೆಗಳ ಕೈವಾಡ ಇದೆ ಎಂಬ ಆರೋಪಿಸಿದರು. ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆ, ಆಸ್ತಿಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ವಸಂತಕುಮಾರ್ ಇದ್ದರು.