ಹಬ್ಬಕ್ಕೆ ಕ್ಷಣಗಣನೆ ಅರಂಭವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಗಣೇಶ ಮೂರ್ತಿ ಸಾಗಿಸಲು ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಯುವಕರು ಹರಸಾಹಸಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಮ್ಮಡಹಳ್ಳಿ ಹೈವೇ ಅಂಡರ್'ಪಾಸ್'ನಲ್ಲಿ ಜರುಗಿತು. ಹೈದರಾಬಾದ್ ಪಟ್ಟಣದಲ್ಲಿ ಸುಮಾರು 20 ಅಡಿಗೂ ಮಿಗಿಲಾದ ಸುಮಾರು ₹ 1.75 ಲಕ್ಷ ಮೌಲ್ಯದ ಗಣೇಶ ಮೂರ್ತಿಯನ್ನು ಕಳೆದ 3 ದಿನಗಳಿಂದ ಸಾಗಿಸಲಾಗುತ್ತಿತ್ತು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಂದ ಗಣೇಶ ಮೂರ್ತಿಯನ್ನು ಉಮ್ಮಡಹಳ್ಳಿ ಗೇಟ್ ಬಳಿ ಅಂಡರ್ ಪಾಸ್ ಮೂಲಕ ಮಂಡ್ಯ ಬೈಪಾಸ್ ರಸ್ತೆ ಸಾಗಿಸಲು ಮುಂದಾದಾಗ ತಡೆಯುಂಟಾಯಿತು. ಬಳಿಕ ಗಣೇಶ ಮೂರ್ತಿಯ ಹಿಂದಿನ ಕಿರೀಟ ಮಡಚಿ ನಿಧಾನವಾಗಿ ಸಾಗಿಸಲು ಭಕ್ತರು ಹರಸಾಹಸಪಟ್ಟರು.