ಕೊಪ್ಪಳ ನಗರದಲ್ಲಿ ಚಾವಟಿಯಿಂದ ಹೊಡೆದುಕೊಂಡು ದುರಗಮರ್ಗಿ ಅಲೆಮಾರಿ ಸಮುದಾಯದಿಂದ ಒಳಮೀಸಲಾತಿ ಜಾರಿಯಲ್ಲಿ ಅನ್ಯಾಯ ಖಂಡಿಸಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಿತು. ಆಗಸ್ಟ್ 29 ರಂದು ಮಧ್ಯಾಹ್ನ 12-30 ಗಂಟೆಗೆ ಕೊಪ್ಪಳ ನಗರದ ಅಶೋಕ ವೃತ್ತದಿಂದ ಆರಂಭವಾದ ಮೇರವಣಿಗೆ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಮೇಲೆ ಕುಳಿತು ಚಾವಟಿಯಿಂದ ಬಾರಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ದೈಹಿಕವಾಗಿ ದಂಡಿಸಿಕೊಂಡು ಒಳಮೀಸಲಾತಿ ಜಾರಿಯಲ್ಲಿ ಅಲೆಮಾರಿಗಳ ಸಮುದಾಯಕ್ಕೆ ಅನ್ಯಾಯವನ್ನು ಖಂಡಿಸಿದರು