ಏಕಗವಾಕ್ಷಿಯಡಿ ಆದಿವಾಸಿಗಳಿಗೆ ಸರ್ಕಾರದ ಸಿಗುವ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು. ಬೆಂಗಳೂರು ಸಮತ್ವ ಟ್ರಸ್ಟ್ ಹಾಗೂ ಅಶೋಕ ಪರಿಸರಸಂಶೋಧನೆ ಮತ್ತು ಪರಿಸರವಿಜ್ಞಾನದತ್ತಿ ಜಿಲ್ಲಾ ಹಾಗೂ ತಾಲೂಕುಸೋಲಿಗ ಸಂಘ, ರಾಜ್ಯಸೋಲಿಗ ಅಭಿವೃದ್ದಿ ಸಂಘದ ವತಿಯಿಂದ ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ‘ಆದಿವಾಸಿ ಕಾಲೇಜು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.