ಚಿತ್ರದುರ್ಗ ತಾಲ್ಲೂಕಿನ ಸೀಭಾರ ಗ್ರಾಮದ ಬಳಿ ನವಜಾತ ಶಿಶು ಪತ್ತೆಯಾಗಿದ್ದು ರಕ್ಷಣೆ ಮಾಡಲಾಗಿದೆ. ಇನ್ನೂ ಗುರುವಾರ ಸಂಜೆ 5 ಗಂಟೆ ವೇಳೆಗೆ ಈ ನವಜಾತ ಶಿಶು ಪತ್ತೆಯಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಹೊರವಲಯದ ಸೀಬಾರ ಬಳಿ ಈ ನವಜಾತ ಶಿಶು ಪತ್ತೆಯಾಗಿದ್ದುರಸ್ತೆ ಬದಿಯಲ್ಲಿ ನವಜಾತ ಶಿಶುವನ್ನ ಪಾಪಿ ಪೋಷಕರು ಬಿಟ್ಟು ಹೋದ ಘಟನೆ ನಡೆದಿದ್ದು ಜನನವಾದ ಕೆಲವೇ ಗಂಟೆಗಳಲ್ಲಿ ಮಗುವನ್ನ ಬಿಟ್ಟು ಪೋಷಕರು ಕಾಲ್ಕಿತ್ತಿದ್ದಾರೆ.