ಗಣಿನಾಡು ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ರಸ್ತೆಯ ಡೆಲ್ಲಿ ಪಬ್ಲಿಕ್ ಶಾಲೆಯ ಪಕ್ಕದ ಕೋಟೇಶ್ ಲೇಔಟ್ ನಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ಆಗಸ್ಟ್ 31, ಭಾನುವಾರ ತಡರಾತ್ರಿ 2:30ರ ಸುಮಾರಿಗೆ ಯುವಕರ ಗುಂಪೊಂದು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಲ್ಲಿನ ಪೆಟ್ರೋಲ್‌ನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.ಕೋಟೇಶ್ ಲೇಔಟ್ ನಿವಾಸಿ ತಿಮ್ಮಾರೆಡ್ಡಿ ಅವರ ಮನೆ ಮುಂದೆ ನಿಂತಿದ್ದ ಬೈಕ್‌ಗಳ ಪೆಟ್ರೋಲ್ ಕಳ್ಳತನವಾಗಿದೆ. ಒಟ್ಟು 16 ಲೀಟರ್ ಪೆಟ್ರೋಲ್ ಕಳವು ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆ ಸಿಕ್ಕಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಹೆಚ್ಚುತ್ತಿರುವ ಇಂತಹ ಕಳ್ಳತನಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬ