ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಭಾವನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹೊಸದಾಗಿ ನಿಯೋಜನೆಯಾದ ನಿಷ್ಠಾವಂತ ಕೆಎಎಸ್ ಅಧಿಕಾರಿ ಸೂರಜ್ ರವರನ್ನ ಶುಕ್ರವಾರ ಭಾವನಹಳ್ಳಿ ಗ್ರಾಮಸ್ಥರು ಮತ್ತು ರೈತ ಮುಖಂಡರಾದ ಮನೋಹರ್ ಹಾಗೂ ಗ್ರಾ. ಪಂ ಸದಸ್ಯ ಮಂಜುನಾಥ್,c. ಕೃಷ್ಣಪ್ಪ, ಶ್ರೀನಿವಾಸರೆಡ್ಡಿ, ರಾಮಾಚಾರಿ,ಚಕ್ಕನಾರಾಯನ್ ಗೌಡ,ನಾರಾಯಣಮ್ಮ,ಸಾಧಪ್ಪ, ಲಕ್ಷ್ಮಣ್, ಕೊರಚನೂರು ಕೃಷ್ಣಪ್ಪ, ಸಂಜಯ್ ರೈತರು ಹಾಗೂ ಗ್ರಾಮಸ್ಥರೆಲ್ಲರು ಹೂಗುಚ್ಚ ನೀಡುವ ಮೂಲಕ ಶುಭ ಹಾರೈಸಿದರು. ಹಾಗೂ ಸ್ಥಳಕ್ಕೆ ಪ್ರಥಮವಾಗಿ ಭೇಟಿ ಕೊಟ್ಟ ವಿಶೇಷ ಭೂಸ್ವಾದೀನ ಅಧಿಕಾರಿ ಸೂರಜ್ ರವರು ಪ್ರತಿಭಟನೆ ಮಾಡಿದ ರೈತರಿಗೆ ಆಗಿರುವ ಬೋಪರಿಹಾರ ಸಮಸ್ಯೆಗಳ ಬಗ್ಗೆ ಹಾಗೂ ನಿಂತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು