ಹುಬ್ಬಳ್ಳಿ: ಗಣೇಶನ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಗರದ ಇಂಡಿ ಪಂಪ್ ದರ್ಗಾದ ಬಳಿ ಕವಾಲಿ ಹಾಡು ಹಾಕುವ ಮೂಲಕ ಭಕ್ತಾಧಿಗಳು ಭಾವೈಕ್ಯತೆ ಮೆರೆದರು. ಇನ್ನೂ ಭಾವೈಕ್ಯತೆ ಮೆರದ ಭಕ್ತಾದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗಿದೆ. ಈ ವರ್ಷ ಗಣೇಶ್ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಾಗಿ ಬಂದಿದ್ದು ವಿಶೇಷವಾಗಿದೆ.