ಕೋರ್ಟ್ ನೋಟೀಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಮಹಿಳೆಯೊಬ್ಬರು ಕಾರದಪುಡಿ ಎರಚಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಕಾಳೆನಹಳ್ಳಿ ಗ್ರಾಮದಲ್ಲಿ ಜರುಗಿದೆ. ಭಾನುವಾರ ಮಧ್ಯಾಹ್ನ ಅಪಘಾತ ಪ್ರಕರಣ ಸಂಬಂಧ ನೋಟೀಸ್ ಕೊಡಲು ಹೋಗಿದ್ದ ಸಿಬ್ಬಂದಿಗೆ ಕಾರದ ಪುಡಿ ಎರಚಿರುವ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆ.ಆರ್.ಪೇಟೆ ಸಿವಿಲ್ ಕೋರ್ಟ್ ಸಿಬ್ಬಂದಿ ಶಂಕರೇಗೌಡ ಎಂಬುವವರ ಕಣ್ಣಿಗೆ ಕಾರದ ಪುಡಿ ಎರಚಿದ ಸಾಕಮ್ಮ ಎಂಬುವವರು ಸ್ಥಳದಿಂದ ತೆರಳುವಂತೆ ಬೆದರಿಕೆ ಒಡ್ಡಿದ್ದಾರೆ. ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಪೊಲೀಸರಿಗೂ ಮಾಹಿತಿ ನೀಡದೆ ಹೋಗಿದ್ದ ಕೋರ್ಟ್ ಸಿಬ್ಬಂದಿ ವಾಹನ ಮಾಲೀಕನ ಜೊತೆ ಕೋರ್ಟ್ ಗೆ ಹೋಗಿದ್ದರು ಎನ್ನಲಾಗಿದೆ.