ಶ್ರವಣ ನೂನ್ಯತೆಯುಳ್ಳ ಮಕ್ಕಳ ಮತ್ತು ಪಾಲಕರಿಗೆ ಶ್ರವಣ ನೂನ್ಯತೆ ತರಬೇತಿ ಮತ್ತು ತಪಾಸಣೆ ಶಿಬಿರ ಯಾದಗಿರಿ ನಗರದ ಜಿಲ್ಲಾ ಶೀಘ್ರ ಪತ್ತೆ ಹಚ್ಚುವ ವಿಭಾಗ ಮತ್ತು ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟೀಸ್ (ಎ.ಪಿ.ಡಿ) ಸಂಯುಕ್ತ ಆಶ್ರಯದಲ್ಲಿ ಶ್ರವಣ ನುನ್ಯತೆ ಹೊಂದಿರುವ ಮಕ್ಕಳ ಪಾಲಕರಿಗೆ ವಿಶೇಷ ತರಬೇತಿ ಶಿಬಿರವನ್ನು ಎರಡು ದಿನಗಳ ಕಾಲ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರದಲ್ಲಿ ಒಟ್ಟು 31 ಪಾಲಕರು ಮತ್ತು 39 ಮಕ್ಕಳು ಭಾಗವಹಿಸಿದರು. ಕಾರ್ಯಕ್ರಮವನ್ನು ಡಾ|| ಕುಮಾರ್ ಅಂಗಡಿ ಅವರು ಉದ್ಘಾಟಿಸಿದರು. ತರಬೇತಿಯನ್ನು ಶ್ರೀ ವಿಜಯ ಕುಮಾರ್ (ಆಡಿಯೋಲಾಜಿಸ್ಟ್) ಮತ್ತು ರಮೇಶ ಮಾಣೆ (ಸಮನ್ವಯ ಶಿಕ್ಷಣ ತರಬೇತಿದಾರ) ಅವರು ನಡೆಸಿಕೊಟ್ಟರು.