ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗಾ ಗ್ರಾಮದಲ್ಲಿ ಶನಿವಾರ ಗಣೇಶ ವಿಸರ್ಜನೆ ವೇಳೆ ಯುವಕನ್ನೊಬ್ಬ ನೀರಲ್ಲಿ ಮುಳುಗಿರುವ ಘಟನೆ ನಡೆದಿತ್ತು ಯಡೊಗಾ ಗ್ರಾಮದ ಯುವಕ ಶುಭಂ ಕುಪ್ಪಟಗರಿ (18) ಮೃತ ದುರ್ದೈವಿಯಾಗಿದ್ದು ಮಲಪ್ರಭಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು ಈಜುಗಾರನಾಗಿದ್ದ ಯುವಕ ಗಣೇಶ ವಿಸರ್ಜಿಸಿ ವಾಪಸ್ ಬರಲಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಅಗ್ನಿಶಾಮಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದ ಖಾನಾಪುರ ಪೊಲೀಸರು 48 ಗಂಟೆಗಳ ಬಳಿಕ ಯುವಕನ ಶವ ಇಂದು ಸೋಮವಾರ 4 ಗಂಟೆಗೆ ಮೃತದೆಹ ಪತ್ತೆಯಾಗಿದೆ ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.