ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರು ರಸ್ತೆಗೆ ಹೋಗುವಾಗ ಅಡ್ಡ ಬರುವ ರೈಲ್ವೆ ಗೇಟ್ ಪ್ರಾಯಾಣಿಕರಿಗೆ ಅನುಕೂಲವಾಗುವ ಬದಲು ನರಕದ ಬಾಗಿಲು ತೋರುತ್ತಿದೆ. ದಿನಕಳೆದಂತೆ ಟ್ರಾಪಿಕ್ ಹೆಚ್ಚಾಗುತ್ತಿದೆ ಅದೆ ಸಮಯಕ್ಕೆ ದಿನಕ್ಕೆ ಎರಡು ಬಾರಿ ಬಂದಾಗುತಿದ್ದ ಗೇಟ್ ಈಗ ಆರು ಬಾರಿ ಬಂದಾಗುತ್ತೆ. ಈ ರಸ್ತೆಯಲ್ಲಿ ಸಾಗುವ ಶಾಲಾ ಕಾಲೇಜುಗಳ ವಾಹನಗಳು, ಆಂಬುಲೆನ್ಸ್ಗಳ ಜೊತೆಗೆ ಇದೆ ರಸ್ತೆಯಲ್ಲಿ ಸಾಗುವ ಹೂವು ಬೆಳೆಗಾರರು ನರಕಯಾತನೆ ಅನುಭವಿಸುವಂತಾಗಿದೆ.