ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ವೀರೇಶ್ ಎಂಬ ರೈತರು ಹಾವು ಕಡಿದು ಕಳೆದ ವಾರ ಸಾವನ್ನಪ್ಪಿದ್ದರು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಚೆನ್ನಕೊಪ್ಪ ಗ್ರಾಮದ ವೀರೇಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಶುಕ್ರವಾರ ಸಂಜೆ 6:20 ಕ್ಕೆ ಧೈರ್ಯ ತುಂಬಿ ಸಾಂತ್ವಾನ ಹೇಳಿದರು. ಸರ್ಕಾರದಿಂದ ಕೂಡಲೇ ಪರಿಹಾರವನ್ನು ದೊರಕಿಸುವ ಕೆಲಸ ಮಾಡಿಸುವುದಾಗಿ ಈ ವೇಳೆ ಭರವಸೆ ನೀಡಿದರು.