Download Now Banner

This browser does not support the video element.

ಬೆಂಗಳೂರು ಪೂರ್ವ: ಸರ್ಕಾರಿ ಆಸ್ಪತ್ರೆ ಹೋಗುವವರಿಗೆ ಗುಡ್ ನ್ಯೂಸ್! ಆಸ್ಪತ್ರೆ ಹೋದ್ರೆ ಈ ಫೆಸಿಲಿಟಿ ತೆಗೆದು ಕೊಳ್ಳಿ! ಇಂದಿರಾ ನಗರದಲ್ಲಿ ಆರೋಗ್ಯ ಸಚಿವರೇ ಘೋಷಣೆ

Bengaluru East, Bengaluru Urban | Sep 2, 2025
ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಪೌಷ್ಟಿಕ ಆಹಾರ ಯೋಜನೆಗೆ ಇವತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ಕೊಟ್ಟಿದ್ದಾರೆ. ಸಪ್ಟೆಂಬರ್ 2ರ ಮಧ್ಯಾಹ್ನ 3:00 ಗಂಟೆಯ ಹೊತ್ತಿಗೆ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಇಂದಿರಾನಗರದಲ್ಲಿರುವಂತಹ ಸರ್ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಚಾಲನೆ ಕೊಟ್ಟಿದ್ದು ಇಸ್ಕಾನ್ ಜೊತೆಗೆ ಆಹಾರ ಪೂರೈಕೆಗೆ 9 ತಿಂಗಳ ಕಾಲ ಒಪ್ಪಂದ ಮಾಡಿಕೊಳ್ಳಲಾಗಿದೆ ಅಷ್ಟೇ ಅಲ್ಲದೆ ನಗರದ ಇನ್ನೂ ಎರಡು ಆಸ್ಪತ್ರೆಗಳಾದ ಕೆ ಸಿ ಜನರಲ್ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆಗು ಕೂಡ ಇಸ್ಕಾನ್ ಇನ್ನು ಮುಂದೆ ದಿನದ ಐದು ಹೊತ್ತು ಊಟವನ್ನು & ಸ್ನಾಕ್ಸ್ ಅನ್ನು ಪೂರೈಕೆ ಮಾಡುತ್ತೆ.
Read More News
T & CPrivacy PolicyContact Us