ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಗಳಿಗೆ ಬರುವ ವಾಹನಗಳ ಸಂಖ್ಯೆಗೆ ಮಿತಿಯನ್ನು ಹೇರಲು ನಾಳೆಯಿಂದ ಹೊಸ ರೂಲ್ಸ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ಪ್ರವಾಸಿಗರು ಇಂದು ಗಿರಿ ಶ್ರೇಣಿ ಭಾಗಕ್ಕೆ ಹರಿದು ಬಂದಿದ್ದರು.