ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಗುರುವಾರ ಮಧ್ಯಾಹ್ನ 2.50ರ ಸುಮಾರು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ದೀಪನ್ ಎನ್ ಎಂ ಅವರು ದಾಂಡೇಲಿ ನಗರದ ವಿವಿದೆಡೆ ಪ್ರತಿಷ್ಠಾಪಿಸಿರುವ ಕುಳಗಿ ರಸ್ತೆ, ಜೆ. ಎನ್.ರಸ್ತೆ ಹಾಗೂ ಸಾಯಿ ಸರ್ಕಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಭೇಟಿ ನೀಡಿದರು. ಗಣೇಶೋತ್ಸವ ಸಮಿತಿಯು ಪ್ರತಿಷ್ಠಾಪಿಸಿದ ಗಣಪತಿಯ ದರ್ಶನ ಪಡೆದು ಅಲ್ಲಿರುವ ಸಮಿತಿಯ ಮುಖಂಡರ ಜೊತೆ ಮಾತನಾಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಪೊಲೀಸ್ ಇಲಾಖೆಯು ಸಾರ್ವಜನಿಕ ಹಿತ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದರು. ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಶಿವಾನಂದ ಮದರಖಂಡಿ, ಸಿ.ಪಿ.ಐ ಜೈಪಾಲ ಪಾಟೀಲ ಹಾಗೂ ಇನ್ನಿತರರು ಇದ್ದರು