ಮೈಸೂರು ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಏನಾಗತ್ತೆ ಅಂತ ಪಿಐಎಲ್ ಸಲ್ಲಿಸಿರುವವರನ್ನೇ ಕೇಳಿ ಎಂದರು. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ಬಗ್ಗೆ ಕೋರ್ಟ್ ಅದನ್ನು ನೋಡಿಕೊಳ್ಳುತ್ತೆ. ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ. ದಸರಾ ಸಾಂಸ್ಕೃತಿಕವಾಗಿ ನಡೆಯುತ್ತಿರುವ ಕಾರ್ಯಕ್ರಮ. ದಸರಾ ಎಲ್ಲರ ಹಬ್ಬ ಒಂದು ಜಾತಿ ಧರ್ಮಕ್ಕೆ ಸೇರಿದ ಹಬ್ಬ ಅಲ್ಲ. ಮುಸ್ಲಿಂ, ಕ್ರಿಸ್ಟಿಯನ್ ಎಲ್ಲರೂ ಬರುತ್ತಾರೆ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ