ದೊಡ್ಡಬಳ್ಳಾಪುರ :ಮಳೆ ಬಂತೆಂದರೆ ಸಾಕು ದೊಡ್ಡಬಳ್ಳಾಪುರ ತಾಲೂಕಿನ ಕಾಡಿನಂಚಿನಲ್ಲಿರುವ ಊರುಗಳಲ್ಲಿ ಚಿರತೆ, ಕರಡಿ ಸೇರಿದಂತೆ ಇತರೆ ಕಾಡು ಪ್ರಾಣಿಗಳ ಹೆಜ್ಜೆ ಗುರುತುಗಳು ಪತ್ತೆಯಾಗುತ್ತಿವೆ.ಅದರಲ್ಲೂ ಅತಿಹೆಚ್ಚಾಗಿ ಚಿರತೆ ಕಾಡಿನಿಂದ ನಾಡಿಗೆ ಬಂದು ಸಾಕು ಪ್ರಾಣಿಗಳಾದ ನಾಯಿ, ಮೇಕೆ, ಕುರಿ, ಹಸು ಸೇರಿದಂತೆ ಇನ್ನಿತರೆ ಪ್ರಾಣಿಗಳನ್ನು ಬೇಟೆಯಾಡುತ್ತಿರುತ್ತದೆ. ಇದರ ಜೊತೆಗೆ ಇತ್ತೀಚೆಗೆ ಕರಡಿಯು ಸಹ ಕಾಡಿನಂಚಿನಲ್ಲಿರುವ ಊರುಗಳಲ್ಲಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಿನ್ನೆ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಓಡ