ಮಣಿಪುರ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ ಮಾಡಿದ ಘಟನೆ ನಡೆದಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನ ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟಿದೆ. ಜೇಕಬ್ ಸೀಕ್ವೆರ್ ಅವರ ತೋಟದ ಬಾವಿಯೇ ನೀರಿನ ಪಂಪ್ ಚಾಲೂ ಆಗದೆ ಇದ್ದಾಗ ಬಾವಿಯಲ್ಲಿನ ಪಂಪನ ವೈಯರನ್ನ ತುಂಡು ಮಾಡಿರುವುದು ತಿಳಿದುಬಂದಿದೆ ಸುಮಾರು ಎರಡರಿಂದ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದೆ ಎಂದು ತಿಳಿದುಬಂದಿದೆ