ಗಣಪತಿ ವಿಸರ್ಜನೆ ವೇಳೆ ಜನರೇಟರ್ ಬ್ಲಾಸ್ಟ್ ಆಗಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಡಿಗಟೆಕೊಪ್ಪ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಮಾಸ್ತಿಕಾಂಬ ಗಣೇಶೋತ್ಸವ ಸಮಿತಿ ವತಿಯಿಂದ ಗಣಪತಿ ವಿಸರ್ಜನೆ ವೇಳೆ ಈ ಅವಘಡ ನಡೆದಿದ್ದು ಜನರೇಟರ್ ಬ್ಲಾಸ್ಟ್ ನಲ್ಲಿ ಲೋಕೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುವನ್ನು ಕೂಡಲೇ ಸಾಗರದ ಆಸ್ಪತ್ರೆಗೆ ಕರದೇಳಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.