ಸೌಜನ್ಯ ಹತ್ಯೆ ಪ್ರಕರಣದಲ್ಲಿ ಘಟನೆ ನಡೆದು 12 ವರ್ಷಗಳು ಕಳೆದರೂ ಕೂಡ ನ್ಯಾಯ ಸಿಕ್ಕಿಲ್ಲ ಎಂಬ ನೋವು ಆ ಕುಟುಂಬದವರಿಗೆ ಇದೆ.ನಮ್ಮ ಕಾರ್ಯಕರ್ತರಿಗೂ ಇದೆ. ಬೇರೆ ಎಲ್ಲಾ ಹಿರಿಯರಿಗೂ ಇದೆ. ನಿನ್ನೆ ನಾನು ಅವರ ಕುಟುಂಬದ ಸದಸ್ಯರನ್ನು ತಾಯಿಯನ್ನು ಭೇಟಿ ಮಾಡಿದ್ದೇನೆ ಅವರು ಸಿಬಿಐ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ ಎಂದು ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಪ್ರಾಮಾಣಿಕವಾಗಿ ರಾಜ್ಯಾಧ್ಯಕ್ಷನಾಗಿ ಅವರ ಅಹವಾಲನ್ನು ಧರ್ಮಸ್ಥಳದಲ್ಲಿ ಕೇಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.