ದಸರಾ ಹಬ್ಬ ಉದ್ಘಾಟನೆ ಭಾನು ಮುಸ್ತಕ ಮಾಡಿದರೆ ಬಿಜೆಪಿಯವರಿಗೆ ಯಾಕೆ ಅಷ್ಟು ಉರಿ ಗೊತ್ತಿಲ್ಲ, ಬಿಜೆಪಿ ಪಕ್ಷದವರಿಗೆ ಮಾಡಲು ಏನು ಕೆಲಸವಿಲ್ಲ ಹೀಗಾಗಿ ವಿನಾಕಾರಣ ಸಮಾಜದಲ್ಲಿ ಧರ್ಮಗಳ ನಡುವೆ ಕೋಮುವಾದ ಸೃಷ್ಟಿಸುವ ಕೆಲಸ ಮಾಡುತ್ತಾರೆ ಎಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಶನಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ದಸರಾ ಉದ್ಘಾಟಕರಾಗಿ ನಿಶಾರ ಅಹ್ಮದ್ ಹಾಗೂ ಮಿರ ಇಸ್ಮೈಲ್ ಅವರು ಸಹ ಮಾಡಿದ್ದಾರೆ ಆಗ ಯಾಕೆ ಬಿಜೆಪಿಯವರು ಯಾಕೆ ತಕರಾರು ತೆಗೆಯಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿ ಅವರು ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.