ತಾಲೂಕಿನಲ್ಲಿ ಎಲ್ಲಾ ಧರ್ಮಗಳ ಜನರು,ಸಹೋದರತ್ವದಿಂದ ಸಾಮಾರಸ್ಯದಿಂದಲೂ ಜೀವನ ನಡೆಸುತ್ತಿ ರುವ ಕಾಲದಲ್ಲಿ ಕೆಲವು ಕಿಡಗೇಡಿಗಳು ಪಟ್ಟಣದಲ್ಲಿ ಪ್ಯಾಲೆಸ್ತೀನ್ ಬಾವುಟ ಹಾರಾಟ ಮಾಡುವುದರ ಮೂಲಕ ದೇಶದ್ರೋಹ ಮಾಡಿ ಬಂಗಾರಪೇಟೆ ತಾಲೂಕಿಗೆ ದೊಡ್ಡ ಕಳಂಕ ತಂದಿರುವವರ ವಿರುದ್ದ,ತುರ್ತುಕ್ರಮಕೈಗೊಳ್ಳಬೇಕೆಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಹುಣಸನಹಳ್ಳಿ ಬಾಲಕೃಷ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ಬುಧವಾರ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ್ ಕೆ.ಎನ್.ಸುಜಾತ ಅವರಿಗೆಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸೆ.5 ರಂದು ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಆಯೋಜಿಸಿದ್ದ ಧಾರ್ಮಿಕ ಆಚರಣೆಯ ರೋಡ್ ಶೋ ಕಾರ್ಯ ಕ್ರಮದಲ್ಲಿ ಈರೀತಿಮಾಡಿದ್ದರು ಎಂದ್ರು