ಅತಿವೇಗ, ಅತಿಭಾರ, ಅಜಾಗರೂಕ ಚಾಲನೆಯಿಂದ ಉಂಟಾಗುವ ಅಪಘಾತ ಪ್ರಕರಣಗಳ ಜತೆಗೆ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿರುವ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ತಾಲೂಕು ಆಡಳಿತ ಹಾಗೂ ಸಂಬAಧಿಸಿದ ಇಲಾಖೆ ಮೀನಮೇಷ ಎಣಿಸುತ್ತಿರುವುದೇಕೆ ಎಂಬ ಪ್ರಶ್ನೆ ಗುಡಿಬಂಡೆ ತಾಲ್ಲೂಕಿನ ಜನತೆಯದ್ದಾಗಿದೆ.ಗುಡಿಬಂಡೆ ತಾಲೂಕಿನಲ್ಲಿ ಕ್ವಾರಿ, ಕ್ರಷರ್ಸ್ ಗಳ ಚಟುವಟಿಕೆ ಹೆಚ್ಚಾಗಿದ್ದು, ಅವುಗಳಿಗೆ ಪೂರಕವಾಗಿ ಟಿಪ್ಪರ್‌ಗಳ ಸಂಚಾರವು ಅತಿಯಾಗಿದೆ. ಇದರಿಂದ ಗ್ರಾಮೀಣ ರಸ್ತೆಗಳು ಹಾಳುಗಿವೆ. ಆದರೆ, ಅವುಗಳ ಅತಿ ವೇಗದ ಓಡಾಟಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಜನಜೀವನಕ್ಕೆ ಸಂಚಕಾರವಾದ ಈ ಕ್ರಷರ್ಸ್ ಹಾಗೂ ಅವುಗಳಿಂದಲೇ ಹೆಚ್ಚಾಗಿರುವ ಟಿಪ್ಪರ್‌ಗಳಿಗೆ ಕಡಿವಾಣ ಹಾಕುವವರ್ಯಾರು ಎಂಬ ಪ್ರಶ್ನೆ