ಗೌರಿಬಿದನೂರು ತಾಲ್ಲೂಕಿನ ಹೊಸೂರು,ಕಸಬಾ,ಡಿ.ಪಾಳ್ಯ ಹೋಬಳಿ ವ್ಯಾಪ್ತಿಯ ಹಕ್ಕಿ-ಪಿಕ್ಕಿ ಕಾಲೂನಿಯ ಮಾರ್ಗದಿಂದ ಹೊಸೂರು, ಸೊನಗಾನಹಳ್ಳಿ ಸೇರುವ ರಸ್ತೆ,ಸಿ.ಎಂ.ರಸ್ತೆಯಿಂದ ಕುರೂಡಿ,ಆನೂಡಿ,ಗೌರಿಬಿದನೂರು ಸೇರುವ ರಸ್ತೆ, ಚಿಕ್ಕಕುರುಗೋಡು,ರಾಮಚಂದ್ರಪುರ ದಿಂದ ಮೇಳ್ಯಾ ಹುಣಸೇನಹಳ್ಳಿ ಸೇರುವ ತಾಲ್ಲೂಕಿನ ಮುಖ್ಯ ರಸ್ತೆಗಳು ಸೇರಿದಂತೆ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆಯ 11.20 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳಿಗೆ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರವರು ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಸುಸಜ್ಜಿತವಾದ ರಸ್ತೆಗಳನ್ನು ಶೀಘ್ರವಾಗಿ ಅನುಕೂಲ ಮಾಡಿಕೊಡಲು ಸೂಚಿಸಿದರು.