ಇಲ್ಲಿನ ಅತ್ಯಂತ ಹಳೆಯದಾದ ಗೌರ್ಮೆಂಟ್ ಜೂನಿಯರ್ ಕಾಲೇಜು ಪ್ರವೇಶ ದ್ವಾರದ ಬಳಿ ಅಕ್ಕಾಪಕ್ಕದ ನಿವಾಸಿಗಳು ಮತ್ತು ವ್ಯಾಪಾರಿಗಳು ನಿತ್ಯದ ತ್ಯಾಜ್ಯ ಅಲ್ಲೇ ಎಸೆಯುತ್ತಿರುವ ಕಾರಣ ವಿದ್ಯಾರ್ಥಿಗಳು ಹಾಗೂ ಆ ಮೂಲಕ ತೆರಳುವ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದು ಮೂಗು ಮುಚ್ಚಿಕೊಂಡು ಅಡ್ಡಾಡುತ್ತಿದ್ದಾರೆ. ಕಾರಣ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಂದ್ರಾಳ ಅಗ್ರಹಿಸಿದ್ದಾರೆ.