ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಸಾವಿರಕ್ಕೂ ಹೆಚ್ಚು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಒಟ್ಟು ಚಾಮರಾಜನಗರ ಜಿಲ್ಲೆಯಲ್ಲಿ 1059 ಕಡೆ ಗಣಪತಿ ಪ್ರತಿಷ್ಠಾಪನೆ ಮಾಡಲು ಏಕಾಗವಾಕ್ಷಿ ಕೇಂದ್ರವು ಅನುಮತಿಯನ್ನು ನೀಡಿದೆ. ಜಿಲ್ಲಾ ಪೊಲೀಸ್ ಮಾಹಿತಿಯನ್ನು ನೀಡಿದೆ. ಚಾಮರಾಜನಗರ ಪಟ್ಟಣದಲ್ಲಿ 80 ಕಡೆ, ಚಾಮರಾಜನಗರ ಗ್ರಾಮಾಂತರ ಭಾಗದಲ್ಲಿ 102 ಕಡೆ, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 95 ಕಡೆ, ಸಂತ್ತೆಮರಳ್ಳಿಯಲ್ಲಿ 33, ಕುದೇರುನಲ್ಲಿ 33, ಗುಂಡ್ಲುಪೇಟೆಯಲ್ಲಿ 121, ಹನೂರಿನಲ್ಲಿ 104, ಮಹದೇಶ್ವರ ಬೆಟ್ಟದಲ್ಲಿ 19 ಕೊಳ್ಳೇಗಾಲ ಪಟ್ಟಣದಲ್ಲಿ 82, ಕೊಳ್ಳೇಗಾಲ ಗ್ರಾಮಾಂತರ ವ್ಯಾಪ್ತಿಯಲ್ಲಿ 95, ಯಳಂದೂರಿನಲ್ಲಿ 79 ಕಡೆ ಪ್ರತಿಷ್ಠಾಪನೆ ಮಾಡಲಾಗಿದೆ.