ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ಧ್ವಜಗಳ ಹಾಕಿರುವ ಘಟನೆಯ ಕುರಿತು ಪ್ರಕರಣವನ್ನು ಇತ್ಯರ್ಥಗೊಳಿಸಲು ಶಾಸಕರು ಹಾಗೂ ತಹಸಿಲ್ದಾರರು ಮಧ್ಯಪ್ರವೇಶಿಸಿ ಎರಡು ಸಮುದಾಯಗಳ ಮುಖಂಡರ ಕರೆದು ಹಾಗೂ ಕಾಲೇಜಿನವರ ಬಳಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣವನ್ನು ಇತ್ಯಾರ್ಥಗೊಳಿಸಲು ಕ್ರಮ ಕೈಗೊಳ್ಳುವಂತೆ ಸೋಮವಾರ ಮಧ್ಯಾನ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ತಹಸಿಲ್ದಾರ್ ಮೂಲಕ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ,ತಾಲೂಕ ಅಧ್ಯಕ್ಷ ನಾಗರಾಜ ದರ್ಬಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.