ಹೊಳೆನರಸೀಪುರ:ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ತಾಲೂಕಿನ ಸಿಗರನಹಳ್ಳಿ ಗ್ರಾಮದ ಪುಷ್ಪ ಎಂಬುವರ ಮನೆಯಲ್ಲಿ ನಡೆದಿದೆ. ಪುಷ್ಪ ಅವರು ಸೆ.4 ರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆಂದು ಹಾಸನದ ಗಾರ್ಮೆಂಟ್ ಗೆ ಹೋಗಿದ್ದರು. ಮನೆಯಲ್ಲಿ ತಂದೆ-ತಾಯಿ, ಮಗ ಇದ್ದರು. ಸಂಜೆ ವಾಪಸ್ ಬಂದಾಗ ಮಗ ದರ್ಶನ್‌ಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಹೋಗಲು ಹಣ ಪಡೆಯಲು ಬೀರು ತೆರೆದಾಗ ಅದರಲ್ಲಿದ್ದ ಹಣ, ಒಡವೆ ಇರಲಿಲ್ಲ.ಮನೆಯ ಹಿಂಭಾಗದ ಬಾಗಿಲು ತಳ್ಳಿ ಒಳ ಬಂದಿರುವ ಕಳ್ಳರು, ಬೀರುವಿನ ಲಾಕ್ ಒಡೆದು 2.58 ಲಕ್ಷ ರೂ.ಹಣ, 30 ಗ್ರಾಂ. ಚಿನ್ನದ ಕೊರಳಿನ ಗುಂಡಿನ ಸರ, 20 ಗ್ರಾಂ.ತೂಕದ ಚಿನ್ನದ 2 ಕೈ ಬಳೆಗಳು, 4 ಗ್ರಾಂ. ತೂಕದ ಚಿನ್ನದ ಹರಳಿನ ಓಲೆ, 7 ಗ್ರಾಂ.ತೂಕದ 2 ಜೊತೆ