ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಮುತ್ತು ಕನ್ನೂರ ಮತ್ತು ಸರಸ್ವತಿ ಕನ್ನೂರ ಎಂಬ ದಂಪತಿ ಸದ್ಯ ಕೃಷಿಕರಾಗಿ ಕೆಲಸ ಮಾಡುತ್ತಿದ್ದು ಸಹಜವಾಗಿ ರೈತರು ಅನ್ನಿಸಿಕೊಳ್ಳದೆ ತಮ್ಮ ಕೃಷಿಪದ್ಧತಿಯಿಂದ ಗ್ರಾಮದ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ. ಬಹಳಷ್ಟು ಜನ ತಾವು ಕಲಿತವಿದ್ಯೆಗೆ ತಕ್ಕ ಉದ್ಯೊಗ ಇಲ್ಲವೆಂದು ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿದ್ದರೆ ತಮಗೆ ಸಿಕ್ಕ ಉದ್ಯೋಗವನ್ನೇ ತೊರೆದು ಕೃಷಿಯತ್ತ ಮುಖ ಮಾಡಿದ್ದಾರೆ