ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಕಸ ವಿಲೇವಾರಿ ಘಟಕದ ಅವ್ಯವಸ್ಥೆಯಿಂದಾಗಿ ಒಂದು ಹಸು ಸಾವನ್ನಪ್ಪಿರುವ ದುರಂತ ಸಂಭವಿಸಿದೆ. ಲೊಕ್ಕನಹಳ್ಳಿ ಗ್ರಾಮದ ಶಿವಣ್ಣ ರವರಿಗೆ ಸೇರಿದ ಹಸು, ಮೇವನ್ನರಿಸಿ ತೆರಳಿದಗ್ರಾಮದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕದ ಬಳಿ ಚೆಲ್ಲಾಪಿಲ್ಲಿಯಾಗಿದ್ದ ತ್ಯಾಜ್ಯವನ್ನು ಸೇವಿಸಿ ಸ್ಥಳದಲ್ಲಿಯೇ ಅಸುನೀಗಿದೆ ಕಳೆದ ಒಂದು ವರ್ಷದಿಂದ ಲೊಕ್ಕನಹಳ್ಳಿಯ ರವಿ ಎಂಬುವವರು ಈ ಘಟಕದಲ್ಲಿ ನಡೆಯುತ್ತಿರುವ ನಿರ್ವಹಣಾ ಅವ್ಯವಸ್ಥೆಯ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಎಂದು ಸ್ಥಳೀಯರು ಆರೋಪಿಸಿದ್ದಾರೆ